ನಿಕೋಲಾ ಟೆಸ್ಲಾ

ನಿಕೋಲಾ ಟೆಸ್ಲಾ ರವರು ಸರ್ಬಿಯಾದಲ್ಲಿ ಜನಿಸಿದರು. (Serbian:  ೧೦ ಜುಲೈ ೧೮೫೬ – ೭ ಜನವರಿ ೧೯೪೩).

ಐವರು ಮಕ್ಕಳಲ್ಲಿ ನಿಕೋಲಾ ನಾಲ್ಕನೆಯವನಾಗಿದ್ದು, ನಿಕೋಲಾ ಐದು ವರ್ಷದವನಿದ್ದಾಗ, ಆತನಿಗೆ ಓರ್ವ ಹಿರಿಯ ಸಹೋದರ ಕುದುರೆ ಸವಾರಿಯ ಆಕಸ್ಮಿಕವೊಂದರಲ್ಲಿ ಮರಣಿಸಿದ. ಆತನ ಹೆಸರು ಡೇನ್‌‌. ಮತ್ತು ಆತನಿಗೆ ಮೂವರು ಸಹೋದರಿಯರಿದ್ದರು (ಮಿಲ್ಕಾ, ಏಂಜಲೀನಾ ಮತ್ತು ಮಾರಿಕಾ). ೧೮೬೨ರಲ್ಲಿ ಆತನ ಕುಟುಂಬವು ಗಾಸ್ಪಿಕ್‌‌ಗೆ ಸ್ಥಳಾಂತರಗೊಂಡಿತು. ಕಾರ್ಲೋವಾಕ್‌‌ನಲ್ಲಿರುವ ಹೈಯರ್‌ ರಿಯಲ್‌ ಜಿಮ್ನಾಸಿಯಮ್‌ನಲ್ಲಿ ಟೆಸ್ಲಾರವರು ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಮೂರು ವರ್ಷಗಳ ಅವಧಿಯಲ್ಲಿ ನಾಲ್ಕು-ವರ್ಷಗಳ ಓದನ್ನು ಅವರು ಪೂರೈಸಿದರು.

ನಂತರ ಗ್ರಾಜ್‌ನಲ್ಲಿನ‌ ಆಸ್ಟ್ರಿಯನ್‌ ಪಾಲಿಟೆಕ್ನಿಕ್‌ನಲ್ಲಿ (೧೮೭೫) ಟೆಸ್ಲಾರವರು ವಿದ್ಯುತ್‌‌‌‌ ಶಿಲ್ಪಶಾಸ್ತ್ರದಲ್ಲಿ ಅಧ್ಯಯನವನ್ನು ಪೂರೈಸಿದರು. ಅಲ್ಲಿ ಓದುತ್ತಿರುವಾಗ ಪರ್ಯಾಯ ವಿದ್ಯುತ್ಪ್ರವಾಹದ ಬಳಕೆಗಳ ಕುರಿತ ಅಧ್ಯಯನವನ್ನು ನಡೆಸಿದರು. ಗ್ರಾಜ್‌‌ನಲ್ಲಿರುವ ವಿಶ್ವವಿದ್ಯಾಲಯದಲ್ಲಿ ತಮ್ಮ ಸ್ನಾತಕ ಪದವಿಗಾಗಿ ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ ತಮ್ಮ ಅಧ್ಯಯನದ ಮೂರನೇ ವರ್ಷ ಪ್ರಥಮ ಸೆಮಿಸ್ಟರ್‌ನ ನಂತರ, ಅವರು ಓದನ್ನು ಮುಂದುವರೆಸಲಿಲ್ಲವೆಂದೂ, ಅದೇ ಕಾರಣಕ್ಕಾಗಿಯೇ ಪದವಿಯನ್ನು ಪಡೆಯಲಿಲ್ಲವೆಂದು ವಿಶ್ವವಿದ್ಯಾಲಯವು ಹೇಳುತ್ತದೆ. ಡಿಸೆಂಬರ್‌ ೧೮೭೮ರಲ್ಲಿ ಗ್ರಾಜ್‌‌ವನ್ನು ತೊರೆದ ಅವರು, ತಮ್ಮ ಕುಟುಂಬದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡರು. ಮಾರಿಬಾರ್‌ಗೆ ತೆರಳಿದ (ಇಂದಿನ ಸ್ಲೊವೇನಿಯಾ) ಅವರು ಒಂದು ವರ್ಷದ ಕಾಲ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸಿದರು. ಈ ಸಮಯದಲ್ಲಿ ಅವರು ನರದೌರ್ಬಲ್ಯಕ್ಕೆ ತುತ್ತಾಗಿದ್ದರು. ನಂತರ ಅವರ ತಂದೆಯವರು ಟೆಸ್ಲಾರವರ ಮನವೊಲಿಸಿ ಪ್ರೇಗ್‌‌‌ನಲ್ಲಿರುವ ಚಾರ್ಲ್ಸ್‌‌-ಫರ್ಡಿನೆಂಡ್‌‌ ವಿಶ್ವವಿದ್ಯಾಲಯಕ್ಕೆ ಸೇರಿಸಿದಾಗ ಅವರು ೧೮೮೦ರ ಬೇಸಿಗೆ ಅವಧಿಯಲ್ಲಿ ತರಗತಿಗಳಿಗೆ ಹಾಜರಾದರು. ಅಲ್ಲಿ ಅವರು ಅರ್ನೆಸ್ಟ್‌ ಮ್ಯಾಕ್‌/ಚ್‌‌ರ ಪ್ರಭಾವಕ್ಕೆ ಒಳಗಾದರು. ತಮ್ಮ ತಂದೆಯ ಮರಣದ ನಂತರ ಕೇವಲ ಒಂದೇ ಅವಧಿಯನ್ನು ಮಾತ್ರವೇ ಮುಗಿಸಿದ್ದರೂ, ವಿಶ್ವವಿದ್ಯಾಲಯವನ್ನು ಅವರು ತೊರೆದರು.

ಇಡೀ ಪುಸ್ತಕಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುತ್ತಾ ಸಾಮಾನ್ಯವಾಗಿ ಭಾವಿಸಿರುವಂತೆ ಛಾಯಾಚಿತ್ರದಂತೆ ಸ್ಫುಟವಾದ ಜ್ಞಾಪಕಶಕ್ತಿ ಹೊಂದಿದ್ದ ಟೆಸ್ಲಾರು ಅನೇಕ ಕೃತಿಗಳನ್ನು ಓದುವುದರಲ್ಲಿ ತೊಡಗಿದರು. ತಮ್ಮ ಆತ್ಮಚರಿತ್ರೆಯಲ್ಲಿ ಈ ಕುರಿತಂತೆ ಪ್ರಸ್ತಾಪಿಸಿರುವ ಟೆಸ್ಲಾರು ಈ ಅವಧಿಯಲ್ಲಿ ತಾನು ದೀರ್ಘಕಾಲೀನ ಪ್ರೇರಣೆಗಳಿಗೆ ಒಳಪಟ್ಟೆ ಎಂದಿದ್ದಾರೆ.

ಟಿವಾದಾರ್‌‌ ಪುಸ್ಕಾಸ್‌‌ರ ಅಡಿಯಲ್ಲಿ ಕೆಲಸ ಮಾಡಲು ಅವರು ಬುಡಾಪೆಸ್ಟ್‌‌‌ಗೆ ಟೆಲೆಗ್ರಾಫ್ ಕಂಪೆನಿಯಾದ, ನ್ಯಾಷನಲ್‌‌ ಟೆಲಿಫೋನ್‌‌ ಕಂಪೆನಿಗೆ ೧೮೮೦ನೇ ಇಸವಿಯಲ್ಲಿ ತೆರಳಿದರು. ಆಸ್ಟ್ರಿಯಾದಲ್ಲಿ ನೆಲೆಸಿದ್ದ ಸರ್ಬಿಯಾದ ಓರ್ವ ಯುವ ಆವಿಷ್ಕಾರಕ ನೆಬೋಜ್ಸಾ ಪೆಟ್ರೋವಿಕ್‌‌ರನ್ನು ಅಲ್ಲಿ ಆತ ಭೇಟಿ ಮಾಡಿದರು. ಅವರುಗಳು ಜೊತೆಗೆ ಕೆಲಸ ಮಾಡಿದ ಅವಧಿಯು ಕಡಿಮೆಯೇ ಆಗಿದ್ದರೂ, ಜೋಡಿ ವಿದ್ದ್ಯುಜ್ಜಲಚಕ್ರಗಳನ್ನು ಬಳಸಿ ಸತತ ವಿದ್ಯುತ್ತನ್ನು ಉತ್ಪಾದಿಸುವ ಯೋಜನೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ೧೮೮೧ರಲ್ಲಿ, ಬುಡಾಪೆಸ್ಟ್‌‌‌ನಲ್ಲಿ ದೂರವಾಣಿ ಕೇಂದ್ರವು ಆರಂಭಗೊಂಡಾಗ, ಟೆಸ್ಲಾರವರು ಕಂಪೆನಿಯ ಪ್ರಧಾನ ವಿದ್ಯುತ್‌ತಜ್ಞರಾದರು, ನಂತರ ರಾಷ್ಟ್ರದ ಪ್ರಪ್ರಥಮ ದೂರವಾಣಿ ವ್ಯವಸ್ಥೆಯ ಅಭಿಯಂತರರಾಗಿ ನಿಯುಕ್ತಗೊಂಡರು. ದೂರವಾಣಿಯ   ಪ್ರಪ್ರಥಮ ಧ್ವನಿಶಕ್ತಿಯ-ವಿದ್ಯುತ್ವರ್ಧಕ [ಪಾವರ್ ಅಂಪ್ಲಿಫಾಯರ್] ಸಾಧನವೊಂದನ್ನು ಕೂಡಾ ಅವರು ನಂತರ ಅಭಿವೃದ್ಧಿಪಡಿಸಿದ್ದರು.

ಕಾಂಟಿನೆಂಟಲ್‌‌ ಎಡಿಸನ್‌‌ ಕಂಪೆನಿ ಯಲ್ಲಿ ಸಾಗರೋತ್ತರ ರಾಷ್ಟ್ರಗಳಿಂದ ಬಂದ ವಿದ್ಯುತ್‌‌ ಉಪಕರಣಗಳಿಗೆ ಎಡಿಸನ್‌ ಸಂಸ್ಥೆಯ ಕಲ್ಪನೆಗಳ ಅನುಸಾರವಾಗಿ ಸುಧಾರಣೆಗಳನ್ನು ವಿನ್ಯಾಸ ಮಾಡುವ ಅಭಿಯಂತರರಾಗಿ ಕೆಲಸ ಮಾಡಲು ೧೮೮೨ರಲ್ಲಿ ಪ್ಯಾರಿಸ್‌‌ಗೆ ಸ್ಥಳಾಂತರಗೊಂಡರು. ೧೮೮೮ರ ವರ್ಷ ಚೋದನೆ ಮೋಟರ್‌ [ಇಂಡಕ್ಸೆನ್ ಮೋಟರ್] ಅನ್ನು ರೂಪಿಸಿದ್ದರು.

ಯುನೈಟೆಡ್‌‌ ಸ್ಟೇಟ್ಸ್‌ನ ನ್ಯೂಯಾರ್ಕ್‌‌ ಮಹಾನಗರಕ್ಕೆ ೬ ಜೂನ್‌ ೧೮೮೪ರಂದು ಆಗಮಿಸಿದ ಟೆಸ್ಲಾರು ಓರ್ವ ಮಾಜಿ ಉದ್ಯೋಗದಾತ ಚಾರ್ಲ್ಸ್‌‌ ಬ್ಯಾಚೆಲರ್‌‌ರಿಂದ ತಂದ ಶಿಫಾರಸು ಪತ್ರದ ಹೊರತಾಗಿ ಹೆಚ್ಚೇನನ್ನೂ ಹೊಂದಿರಲಿಲ್ಲ. ಥಾಮಸ್‌ ಎಡಿಸನ್‌ರವರನ್ನು ಉದ್ದೇಶಿಸಿ ಬರೆದ ಶಿಫಾರಸು ಪತ್ರದಲ್ಲಿ ಬ್ಯಾಚೆಲರ್‌ರು ಹೀಗೆ ಬರೆದಿದ್ದರು, "ನಾನು ಇಬ್ಬರು ಶ್ರೇಷ್ಠ ವ್ಯಕ್ತಿಗಳನ್ನು ಬಲ್ಲೆ, ಅವರಲ್ಲಿ ಒಬ್ಬರು ತಾವು ; ಮತ್ತೋರ್ವರೆಂದರೆ ಈ ಯುವಕ." ಎಡಿಸನ್‌ ಮೆಷೀನ್‌ ವರ್ಕ್ಸ್‌ ಸಂಸ್ಥೆ ಯಲ್ಲಿ ಕೆಲಸ ಮಾಡಲು ಟೆಸ್ಲಾರನ್ನು ಎಡಿಸನ್‌ ನೇಮಿಸಿಕೊಂಡರು. ಸರಳ ವಿದ್ಯುತ್‌‌‌‌ ಶಿಲ್ಪಶಾಸ್ತ್ರದೊಂದಿಗೆ ಎಡಿಸನ್‌ ಸಂಸ್ಥೆಯಲ್ಲಿ ಟೆಸ್ಲಾ'ರ ಕಾರ್ಯವು ಆರಂಭವಾಯಿತಾದರೂ ಶೀಘ್ರದಲ್ಲೇ ಕಂಪೆನಿ'ಯ ತೀವ್ರ ಕಷ್ಟಕರ ಸಮಸ್ಯೆಗಳನ್ನು ನಿವಾರಿಸುವಷ್ಟು ಮುಂದುವರೆದರು. ಎಡಿಸನ್‌ ಕಂಪೆನಿ'ಯ ಏಕಮುಖ ವಿದ್ಯುತ್‌ ವಿದ್ಯುಜ್ಜನಕಗಳ ಸಂಪೂರ್ಣ ಮರುವಿನ್ಯಾಸದ ಕಾರ್ಯವನ್ನೂ ಸಹಾ ಟೆಸ್ಲಾರಿಗೆ ನೀಡಲಾಯಿತು.

ಎಡಿಸನ್‌' ಸಂಸ್ಥೆಯ ಅಸಮರ್ಥ ಮೋಟಾರ್‌ಗಳು ಮತ್ತು ವಿದ್ಯುಜ್ಜನಕಗಳನ್ನು ಮರುವಿನ್ಯಾಸ ಮಾಡಿ ಅದರ ಸೇವಾಸಾಮರ್ಥ್ಯ ಹಾಗೂ ವೆಚ್ಚಗಳಲ್ಲಿ ಸುಧಾರಣೆ ತಂದರೆ ತಮಗೆ US$೫೦,೦೦೦ರಷ್ಟು ಮೊತ್ತವನ್ನು  ನೀಡುವೆವೆಂದು ಪ್ರಸ್ತಾಪವಿದ್ದುದಾಗಿ ಟೆಸ್ಲಾರು ಹೇಳಿಕೊಂಡಿದ್ದರು. ಹೇಳಿದಂತೆ ಕಾರ್ಯ ನಿರ್ವಹಿಸಿದುದಕ್ಕೆ ಮೊತ್ತವನ್ನು ಪಾವತಿಸುವಂತೆ ೧೮೮೫ರಲ್ಲಿ ಟೆಸ್ಲಾರು ಕೇಳಿದಾಗ "ಟೆಸ್ಲಾ, ನೀವು ನಮ್ಮ ಅಮೇರಿಕನ್‌‌ ಶೈಲಿಯ ತಮಾಷೆಯನ್ನು ಅರ್ಥ ಮಾಡಿಕೊಳ್ಳಲಿಲ್ಲವೆನಿಸುತ್ತೆ," ಎಂದು ಪ್ರತ್ಯುತ್ತರಿಸುವ ಮೂಲಕ ಎಡಿಸನ್‌ ತಮ್ಮ ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದರು. ಹಿಂದೆ ಕೊಟ್ಟ ಮಾತಿನಷ್ಟು ಮೊತ್ತವನ್ನು ಪಡೆಯಲು ಪ್ರತಿ ವಾರಕ್ಕೆ US$೧೮ರಂತೆ ದುಡಿಯುತ್ತಿದ್ದ ಟೆಸ್ಲಾರು ೫೩ ವರ್ಷಗಳ ಕಾಲ ದುಡಿಯಬೇಕಿತ್ತು. ಆ ಮೊತ್ತವು ಕಂಪೆನಿಯ ಆರಂಭಿಕ ಬಂಡವಾಳಕ್ಕೆ ಸಮನಾಗಿತ್ತು. ವೇತನವನ್ನು ಏರಿಸಿ ಪ್ರತಿ ವಾರಕ್ಕೆ US$೨೫ರಷ್ಟು ನಿಗದಿಪಡಿಸುವ ತಮ್ಮ ಕೋರಿಕೆಯನ್ನು ಒಪ್ಪದ ಮರುಕ್ಷಣವೇ ಟೆಸ್ಲಾರು ಸಂಸ್ಥೆಗೆ ರಾಜಿನಾಮೆ ನೀಡಿದರು.

ಕೆಲಸದ ಅಗತ್ಯವಿದ್ದ ಟೆಸ್ಲಾರು ಅಂತಿಮವಾಗಿ, ಎಡಿಸನ್‌ ಕಂಪೆನಿಗಾಗಿಯೇ ಅಲ್ಪ ಕಾಲ ಕಂದಕಗಳನ್ನು ಅಗೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಯಿತು. ಅವರು ಈ ಅವಧಿಯನ್ನು ತಮ್ಮ AC ಬಹುಫೇಸ್‌ ವ್ಯವಸ್ಥೆಯ ಬಗ್ಗೆ ಗಮನ ಕೇಂದ್ರೀಕರಿಸಲು ಬಳಸಿಕೊಂಡರು.

ಟೆಸ್ಲಾ ಎಲೆಕ್ಟ್ರಿಕ್‌ ಲೈಟ್‌ & ಮ್ಯಾನುಫ್ಯಾಕ್ಚರಿಂಗ್‌ ಎಂಬ ಹೆಸರಿನ ತಮ್ಮದೇ ಸ್ವಂತ ಕಂಪೆನಿಯನ್ನು ಟೆಸ್ಲಾರು ೧೮೮೬ರಲ್ಲಿ ಸ್ಥಾಪಿಸಿದ್ದರು. ಪರ್ಯಾಯ ವಿದ್ಯುತ್ಪ್ರವಾಹ ಮೋಟಾರ್‌ ನಿರ್ಮಾಣದ ಬಗೆಗಿನ ಟೆಸ್ಲಾರ ಯೋಜನೆಗಳ ಅಪಸ್ವರವೆತ್ತಿದ ಆರಂಭಿಕ ಹಣಕಾಸಿನ ಹೂಡಿಕೆದಾರರು ಅಂತಿಮವಾಗಿ ಅವರನ್ನು ಕಂಪೆನಿಯ ಜವಾಬ್ದಾರಿಗಳಿಂದ ಬಿಡುಗಡೆ ಮಾಡಿದರು.

ತಮ್ಮ ಜೀವನ ನಡೆಸಲು ಹಾಗೂ ಮುಂದಿನ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಟೆಸ್ಲಾರು ೧೮೮೬ರಿಂದ ೧೮೮೭ರವರೆಗೆ ನ್ಯೂಯಾರ್ಕ್‌‌ನಲ್ಲಿ ಮತ್ತೆ ಕಾರ್ಮಿಕರಾಗಿ ದುಡಿಯಲು ತೊಡಗಿದರು. ೧೮೮೭ರಲ್ಲಿ, ಮೊದಲಿನ ವಿದ್ಯುತ್‌ಕೂರ್ಚರಹಿತ ಪರ್ಯಾಯ ವಿದ್ಯುತ್ಪ್ರವಾಹ ಚೋದಕ ಮೋಟಾರ್‌ ಅನ್ನು ನಿರ್ಮಿಸಿದ್ದ ಅವರು, ೧೮೮೮ರಲ್ಲಿ ಅಮೇರಿಕನ್‌‌ ಇನ್‌‌ಸ್ಟಿಟ್ಯೂಟ್‌‌ ಆಫ್‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್ ‌‌ (ಈಗ IEEE) ಸಂಸ್ಥೆಯಲ್ಲಿ ನಿದರ್ಶಿಸಿ ತೋರಿಸಿದ್ದರು. ಅದೇ ವರ್ಷ, ಅವರು ತಮ್ಮ ಟೆಸ್ಲಾ ಸುರುಳಿಯ ಮೂಲತತ್ವಗಳನ್ನು ಅಭಿವೃದ್ಧಿಪಡಿಸಿದರಲ್ಲದೇ ವೆಸ್ಟಿಂಗ್‌‌ಹೌಸ್‌‌ ಎಲೆಕ್ಟ್ರಿಕ್‌‌‌‌ & ಮ್ಯಾನುಫ್ಯಾಕ್ಚರಿಂಗ್‌‌ ಕಂಪೆನಿ'ಯ ಪಿಟ್ಸ್‌‌‌ಬರ್ಗ್‌‌ ಪ್ರಯೋಗಾಲಯದಲ್ಲಿ ಜಾರ್ಜ್‌‌‌ ವೆಸ್ಟಿಂಗ್‌‌ಹೌಸ್‌‌ರೊಡನೆ ಕಾರ್ಯನಿರ್ವಹಿಸಲು ಆರಂಭಿಸಿದ್ದರು. ಪರ್ಯಾಯ ವಿದ್ಯುತ್ಪ್ರವಾಹ ವಿದ್ಯುಚ್ಛಕ್ತಿಯ ದೀರ್ಘ ಅಂತರದ ಸಂವಹನವನ್ನು ಕಾರ್ಯಸಾಧ್ಯಗೊಳಿಸುವ ಬಹುಫೇಸ್‌ ವ್ಯವಸ್ಥೆಗಳ ಬಗ್ಗೆ ಅವರ ಕಲ್ಪನೆಯನ್ನು ವೆಸ್ಟಿಂಗ್‌‌ಹೌಸ್‌‌ ಸಂಸ್ಥೆಯು ಸ್ವೀಕರಿಸಿತು.

ಸಂಶೋಧನೆಯ ಮೊದಲಲ್ಲಿ, ಕ್ಷ-ಕಿರಣಗಳನ್ನು ಉತ್ಪಾದಿಸಲು ಅನೇಕ ಪ್ರಾಯೋಗಿಕ ವ್ಯವಸ್ಥೆಗಳನ್ನು ಟೆಸ್ಲಾರು ಏರ್ಪಡಿಸಿಕೊಂಡಿದ್ದರು. ಟೆಸ್ಲಾರ ಕ್ಷ-ಕಿರಣಗಳ ಉಪಕರಣವು, ಸಾಧಾರಣ ಉಪಕರಣಗಳ ಮೂಲಕ ಪಡೆಯ ಬಲ್ಲ ದಾಗಿರುವುದಕ್ಕಿಂತಲೂ ಅಧಿಕ ಸಾಮರ್ಥ್ಯದ ರಾಂಟ್‌‌ಜೆನ್‌‌ ಕಿರಣಗಳನ್ನು ಉತ್ಪಾದಿಸಲು ಅನುವು ಮಾಡಿ ಕೊಡುತ್ತದೆ" ಎಂಬು ಒಬ್ಬ ವೆಕ್ತಿ ಅಭಿಪ್ರಾಯಪಟ್ಟಿದ್ದರು.

ಅದೇ ಕ್ಷೇತ್ರದಲ್ಲಿಯೇ ಟೆಸ್ಲಾರು ಸಂಶೋಧನೆಯನ್ನು ಮುಂದುವರೆಸಿದರು. ರಾಂಟ್‌‌ಜೆನ್‌‌'ರ ಆವಿಷ್ಕಾರಕ್ಕೆ ಮುಂಚೆಯೇ ಅನೇಕ ಪ್ರಯೋಗಗಳನ್ನು ಮಾಡಿದ್ದರೂ (ನಂತರ ರಾಂಟ್‌‌ಜೆನ್‌‌ರಿಗೆ ಕಳುಹಿಸಿದ ತನ್ನ ಕೈಗಳ ಮೂಳೆಗಳ ಛಾಯಾಚಿತ್ರಗಳನ್ನು ಮೂಡಿಸುವುದೂ ಸೇರಿದಂತೆ) ತನ್ನ ಶೋಧನೆಗಳ ಕುರಿತು ವ್ಯಾಪಕ ಪ್ರಚಾರವನ್ನು ಕಂಡುಕೊಂಡಿರಲಿಲ್ಲ; ಅವರ ಸಂಶೋಧನೆಗಳಲ್ಲಿ ಬಹುತೇಕವು ಮಾರ್ಚ್‌ ೧೮೯೫ರಲ್ಲಿ ನಡೆದ ೫ತ್‌‌ ಅವೆನ್ಯೂ ರಸ್ತೆಯ ಪ್ರಯೋಗಾಲಯದ ಅಗ್ನಿ ಆಕಸ್ಮಿಕದಲ್ಲಿ ಸುಟ್ಟುಹೋಗಿದ್ದವು.

ಬಹುಫೇಸ್‌‌ ವಿದ್ಯುಚ್ಛಕ್ತಿ ವ್ಯವಸ್ಥೆಯ ಬಗೆಗಿನ ಪ್ರಥಮ ಹಕ್ಕುಸ್ವಾಮ್ಯವನ್ನು ಅವರಿಗೆ ನೀಡಲ್ಪಟ್ಟಾಗ ಟೆಸ್ಲಾರವರು ೩೬ ವರ್ಷದವರಾಗಿದ್ದರು. ಆ ವ್ಯವಸ್ಥೆಯ ಮತ್ತು ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರದ ಮೂಲತತ್ವಗಳ ಬಗೆಗಿನ ಸಂಶೋಧನೆಯನ್ನು ಅವರು ಮುಂದುವರೆಸಿದರು. ಆಧುನಿಕ-ದಿನಮಾನದ IEEE ಸಂಸ್ಥೆಯ ಪೂರ್ವವರ್ತಿ ಸಂಸ್ಥೆಯಾದ ಅಮೇರಿಕನ್‌‌ ಇನ್‌‌ಸ್ಟಿಟ್ಯೂಟ್‌ ಆಫ್‌‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್‌‌ ಸಂಸ್ಥೆಯ ಉಪಾಧ್ಯಕ್ಷರಾಗಿ ಟೆಸ್ಲಾರು ೧೮೯೨ರಿಂದ ೧೮೯೪ರ ಅವಧಿಯಲ್ಲಿ (ಇನ್‌‌ಸ್ಟಿಟ್ಯೂಟ್‌ ಆಫ್‌‌ ರೇಡಿಯೋ ಎಂಜಿನಿಯರ್ಸ್‌‌ ಸಂಸ್ಥೆಯೊಂದಿಗೆ) ಕಾರ್ಯನಿರ್ವಹಿಸಿದ್ದರು. ೧೮೯೩ರಿಂದ ೧೮೯೫ರವರೆಗಿನ ಅವಧಿಯಲ್ಲಿ ಅವರು ಉನ್ನತ ತರಂಗಾಂತರ ಪರ್ಯಾಯ ವಿದ್ಯುತ್ಪ್ರವಾಹಗಳ ಬಗ್ಗೆ ಪರಿಶೋಧನೆಯನ್ನು ಕೈಗೊಂಡರು. ಶಂಕುವಿನಾಕಾರದ ಟೆಸ್ಲಾ ಸುರುಳಿಯೊಂದನ್ನು ಬಳಸಿ ಒಂದು ದಶಲಕ್ಷ ವೋಲ್ಟ್‌ಗಳ AC ವಿದ್ಯುತ್ತನ್ನು ಉತ್ಪಾದಿಸಿದರಲ್ಲದೇ ವಾಹಕಗಳಲ್ಲಿನ ಸ್ಕಿನ್‌ ಪರಿಣಾಮ ದ ಪರಿಶೋಧನೆ, ಕ್ರಮಪಡಿಸಿದ ವಿದ್ಯುನ್ಮಂಡಲಗಳನ್ನು ವಿನ್ಯಾಸ ಮಾಡುವಿಕೆ, ನಿದ್ದೆ ಬರಿಸುವ ಯಂತ್ರವನ್ನು ಆವಿಷ್ಕರಿಸುವಿಕೆ, ತಂತಿರಹಿತ ಅನಿಲ ವಿಸರ್ಜನಾ ದೀಪಗಳು, ಮತ್ತು ಪ್ರಪ್ರಥಮ ರೇಡಿಯೋ ಪ್ರೇಷಕವನ್ನು ರೂಪಿಸುತ್ತಾ ವಿದ್ಯುತ್ಕಾಂತೀಯ ಶಕ್ತಿಯನ್ನು ತಂತಿರಹಿತವಾಗಿ ಅವರು ಪ್ರಸಾರಿಸಿದ್ದರು. ೧೮೯೩ರಲ್ಲಿ ಮಿಸ್ಸೋರಿ/ಮಿಸ್ಸೌರಿಯ St. ಲೂಯಿಸ್‌‌ನಲ್ಲಿ ಟೆಸ್ಲಾರು ರೇಡಿಯೋ ಸಂಪರ್ಕ/ಸಂವಹನಕ್ಕೆ ಸಂಬಂಧಿಸಿದ ನಿ/ಪ್ರದರ್ಶನವನ್ನು ನೀಡಿದರು. ಪೆನ್ಸಿಲ್‌ವೇನಿಯಾದ ಫಿಲಡೆಲ್ಫಿಯಾದಲ್ಲಿನ ಫ್ರಾಂಕ್ಲಿನ್‌‌ ಇನ್‌‌ಸ್ಟಿಟ್ಯೂಟ್‌ ಸಂಸ್ಥೆ ಮತ್ತು ನ್ಯಾಷನಲ್‌‌ ಎಲೆಕ್ಟ್ರಿಕ್‌ ಲೈಟ್‌‌ ಅಸೋಸಿಯೇಷನ್‌ಗಳನ್ನುದ್ದೇಶಿಸಿ ಮಾತನಾಡಿದ ಅವರು ಅದರ ಪ್ರಕ್ರಿಯೆಯನ್ನು ಹಾಗೂ ಮೂಲತತ್ವಗಳನ್ನು ವಿವರವಾಗಿ ವರ್ಣಿಸಿದರು. ವಿವಿಧ ಮಾಧ್ಯಮಗಳಲ್ಲಿ ಟೆಸ್ಲಾ'ರ ನಿ/ಪ್ರದರ್ಶನಗಳ ಬಗ್ಗೆ ವ್ಯಾಪಕವಾಗಿ ಚರ್ಚೆಯು ಕಂಡುಬಂದಿತು. ಆಕಾಶದುದ್ದಕ್ಕೂ ಲಭ್ಯವಿರುವ ಶಕ್ತಿಯನ್ನು ಬಳಸಿಕೊಳ್ಳುವತ್ತಲೂ ಟೆಸ್ಲಾರು ಪರಿಶೋಧನೆ ನಡೆಸಿದರು. "ಅನೇಕ ತಲೆಮಾರುಗಳು ಸರಿದುಹೋಗುವ ಮುನ್ನ, ನಮ್ಮ ಯಂತ್ರಗಳು ಬ್ರಹ್ಮಾಂಡದ ಯಾವುದೇ ಮೂಲೆಯಿಂದಲೂ ತಮಗೆ ಬೇಕಾದ ಶಕ್ತಿಯನ್ನು ಪಡೆಯಬಲ್ಲವಾಗಿರುತ್ತವೆ" ಎಂದು ಹೇಳುತ್ತಿದ್ದ ಅವರದು ಮಾನವನು ತಾನು ಬಳಸುವ ಯಂತ್ರಗಳನ್ನು ನಿಸರ್ಗದ ಪರಿಚಲನೆಗೆ ಸಂಯೋಜಿಸುವಲ್ಲಿ ಸಫಲವಾಗುವುದು ಸುನಿಶ್ಚಿತ ಆದರೆ ಅದಕ್ಕೆ ಸಮಯ ಬೇಕಷ್ಟೆ ಎಂಬ ಪ್ರತಿಪಾದನೆಯಾಗಿತ್ತು."

ಷಿಕಾಗೋದಲ್ಲಿ ನಡೆದ ಅಂತರರಾಷ್ಟ್ರೀಯ ವಸ್ತುಪ್ರದರ್ಶನದಲ್ಲಿ ಪ್ರಪ್ರಥಮ ಬಾರಿಗೆ ವಿದ್ಯುತ್‌-ಸಂಬಂಧಿ ಪ್ರದರ್ಶನಗಳಿಗೆ ಇಡೀ ಕಟ್ಟಡವನ್ನೇ ಮೀಸಲಿರಿಸಿದ್ದ ವರ್ಲ್ಡ್‌‌ಸ್‌ ಎಕ್ಸ್‌‌‌‌ಪೊಸಿಷನ್‌ ಎಂದು ಕರೆಯಲ್ಪಟ್ಟ ವರ್ಲ್ಡ್‌‌ಸ್‌ ಕೊಲಂಬಿಯನ್‌ ಎಕ್ಸ್‌‌‌‌ಪೊಸಿಷನ್‌ ವಸ್ತುಪ್ರದರ್ಶನವು ೧೮೯೩ರಲ್ಲಿ ನಡೆಯಿತು. ಟೆಸ್ಲಾ ಮತ್ತು ಜಾರ್ಜ್‌‌‌ ವೆಸ್ಟಿಂಗ್‌‌ಹೌಸ್‌‌ರವರುಗಳು ವಸ್ತುಪ್ರದರ್ಶನವನ್ನು ಬೆಳಗಲು AC ವಿದ್ಯುತ್ತನ್ನು ಬಳಸಿ ತನ್ಮೂಲಕ ಸಂದರ್ಶಕರಿಗೆ ಅದನ್ನು ಪರಿಚಯಿಸಿದ್ದುದರಿಂದ ಅದೊಂದು ಐತಿಹಾಸಿಕ ಘಟನೆಯಾಗಿತ್ತು. ಇಲ್ಲಿ ಪ್ರದರ್ಶಿಸಲಾಗಿದ್ದ ಕೆಲ ವಸ್ತುಗಳಲ್ಲಿ ಟೆಸ್ಲಾ'ರ ಪ್ರತಿದೀಪ್ತಿ ದೀಪಗಳು ಮತ್ತು ಏಕ ಘಟಕ ಬಲ್ಬ್‌ದೀಪಗಳು ಸೇರಿದ್ದವು. ಓರ್ವ ವೀಕ್ಷಕ ಹೀಗೆಂದು ಟಿಪ್ಪಣಿ ಬರೆದಿದ್ದರು:

Within the room was suspended two hard-rubber plates covered with tin foil. These were about fifteen feet apart, and served as terminals of the wires leading from the transformers. When the current was turned on, the lamps or tubes, which had no wires connected to them, but lay on a table between the suspended plates, or which might be held in the hand in almost any part of the room, were made luminous. These were the same experiments and the same apparatus shown by Tesla in London about two years previous, "where they produced so much wonder and astonishment".

"ಕೊಲಂಬಸ್‌ನ ಮೊಟ್ಟೆ/ಎಗ್‌ ಆಫ್‌ ಕೊಲಂಬಸ್ ‌" ಎಂದು ಕರೆಸಿಕೊಳ್ಳುತ್ತಿದ್ದ ಅವರು ತಯಾರಿಸಿದ್ದ ತಾಮ್ರದಿಂದ ತಯಾರಿಸಿದ ಮೊಟ್ಟೆಯನ್ನು ನಿಲ್ಲುವಂತೆ ಮಾಡಿ ತೋರಿಸುವ ಮೂಲಕ ಟೆಸ್ಲಾರವರು ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರ ಮತ್ತು ಚೋದಿತ ಮೋಟಾರ್‌ಗಳ ಮೂಲತತ್ವಗಳನ್ನು ಕೂಡಾ ವಿವರವಾಗಿ ವರ್ಣಿಸಿದ್ದರು.

ಅನೇಕ ಭಾಷೆಗಳಲ್ಲಿ ಟೆಸ್ಲಾರವರು ನಿರರ್ಗಳವಾಗಿ ಸಂಭಾಷಿಸಬಲ್ಲವರಾಗಿದ್ದರು. ಸರ್ಬಿಯನ್‌ ಭಾಷೆಯ ಜೊತೆಗೆ ಅವರು : ಝೆಕ್‌, ಆಂಗ್ಲ, ಫ್ರೆಂಚ್‌‌, ಜರ್ಮನ್‌, ಹಂಗೇರಿಯನ್‌, ಇಟಾಲಿಯನ್‌ ಮತ್ತು ಲ್ಯಾಟಿನ್‌ ಎಂಬ ಏಳು ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದರು.

Comments

Popular posts from this blog