Posts

Showing posts from August, 2023
  ಆಧುನಿಕ ವಿಜ್ಞಾನ ಬೆಳೆದದ್ದು ಕ್ರಿಸ್ತಶಕ 1500ರ ನಂತರದಲ್ಲಿ ವಿಶ್ವದ ಸಮಸ್ತ ಕ್ರೀಯೆಗಳಲ್ಲಿಯೂ ನಿರ್ದಿಷ್ಟ ಕ್ರಮವಿದೆ. ಈ ಕ್ರಮಗಳನ್ನು ಗ್ರಹಿಸಿ ಯುಕ್ತ ಭಾಷೆಯಲ್ಲಿ ವಿವರಿಸಬಲ್ಲ ಸಾಮರ್ಥ್ಯ ಮಾನವಮತಿಗಿದೆ. ತಪಾಶೆಣೆಗೆಂದು ತೆಗೆದುಕೊಂಡ ಸಮಸ್ಯೆ ಕುರಿತಂತೆ ವ್ಯವಸ್ಥಿತವಾಗಿ ಮಾಹಿತಿಗಳನ್ನು ಕಲೆಹಾಕುವುದು, ಇವುಗಳನ್ನು ಕ್ರಮಬದ್ಧವಾಗಿ ಅಳವಡಿಸಿ ವಿಶ್ಲೇಷಿಸಿ ಪ್ರಯೋಗಮಾಡುವುದು, ಮತ್ತು ಸಂಗತಿಗೆ ಸರಿದೂಗುವ ಸೂತ್ರ ನಿರೂಪಣೆ ಗೈಯುವುದು. ಇದೊಂದು ವ್ಯವಸ್ಥಿತ ಜ್ಞಾನ ಯಾತ್ರೆ. ಪ್ರಯೋಗ ಮಾರ್ಗ ಮತ್ತು ಪ್ರಯೋಗ ಬುದ್ಧಿ ಯೋಗ. 1600-ಸತ್ಯಾನ್ವೇಶಣೆಯ ಹೊಸ ತತ್ವಗಳು, ಮತ್ತು ಪ್ರಾಯೋಗಿಕ ಪರಿಶೀಲನಾ ಪಧತಿಯ ಉಗಮ. ಪ್ರಯೋಗಗಳ ಆಧಾರದ ಮೇಲೆ ಸತ್ಯವನ್ನು ನಿರ್ಧರಿಸುವ ತೀರ್ಮಾನವಾಯಿತು. ಕೊಪರ್ನಿಕಸನ ಸಿಧಾಂತ: ಕೊಪರ್ನಿಕಸನು 1473 ರಲ್ಲಿ ಪೋಲ್ಯಾಂಡ್ ದೇಶದಲ್ಲಿ ಹುಟ್ಟಿದ. 1496 ರಲ್ಲಿ ಈತನು ಬೊಲೊಗ್ನಾ ವಿಶ್ವ ವಿದ್ಯಾಲಯಕ್ಕೆ ಸೇರಿದನು. ಬಹಳ ಹಿಂದಿನ ಕಾಲದಿಂದಲೂ ಯುರೋಪಿಯನ್ನರು ಭೂಕೇಂದ್ರವಾದವನ್ನು ನಂಬಿದರು. ಆದರೆ ಖಗೋಳ ವೀಕ್ಷೆಣೆಯ ಕೆಲವು ಸಂಗತಿಗಳು ಈ ಸಿಧಾಂತಕ್ಕೆ ವಿರುದ್ಧವಾಗಿದ್ದವು. 1514-ಕೊಪರ್ನಿಕಸನು ಸೂರ್ಯನನ್ನು ಕೇಂದ್ರಬಿಂದುವಾಗಿಸಿ, ಬರಿಗಣ್ಣಿಗೆ ಕಾಣುವ ಎಲ್ಲ ಗ್ರಹಗಳು [ನಮ್ಮ ಭೂಮಿಯನ್ನು ಒಳಗೊಂಡು] ಸೂರ್ಯನನ್ನು ವಿವಿಧ ಕಕ್ಷೆಗಳಲ್ಲಿ ಸುತ್ತುತ್ತವೆ ಎಂದು ಸಾರಿದನು. ಜಗದ ಕೇಂದ್ರ ಭೂಮಿ ಅಲ್ಲ, ಬದಲಿಗೆ ಸೂರ್ಯ ಎಂದು ಕ...