ಆಧುನಿಕ ವಿಜ್ಞಾನ ಬೆಳೆದದ್ದು ಕ್ರಿಸ್ತಶಕ 1500ರ ನಂತರದಲ್ಲಿ

ವಿಶ್ವದ ಸಮಸ್ತ ಕ್ರೀಯೆಗಳಲ್ಲಿಯೂ ನಿರ್ದಿಷ್ಟ ಕ್ರಮವಿದೆ. ಈ ಕ್ರಮಗಳನ್ನು ಗ್ರಹಿಸಿ ಯುಕ್ತ ಭಾಷೆಯಲ್ಲಿ ವಿವರಿಸಬಲ್ಲ ಸಾಮರ್ಥ್ಯ ಮಾನವಮತಿಗಿದೆ. ತಪಾಶೆಣೆಗೆಂದು ತೆಗೆದುಕೊಂಡ ಸಮಸ್ಯೆ ಕುರಿತಂತೆ ವ್ಯವಸ್ಥಿತವಾಗಿ ಮಾಹಿತಿಗಳನ್ನು ಕಲೆಹಾಕುವುದು, ಇವುಗಳನ್ನು ಕ್ರಮಬದ್ಧವಾಗಿ ಅಳವಡಿಸಿ ವಿಶ್ಲೇಷಿಸಿ ಪ್ರಯೋಗಮಾಡುವುದು, ಮತ್ತು ಸಂಗತಿಗೆ ಸರಿದೂಗುವ ಸೂತ್ರ ನಿರೂಪಣೆ ಗೈಯುವುದು. ಇದೊಂದು ವ್ಯವಸ್ಥಿತ ಜ್ಞಾನ ಯಾತ್ರೆ. ಪ್ರಯೋಗ ಮಾರ್ಗ ಮತ್ತು ಪ್ರಯೋಗ ಬುದ್ಧಿ ಯೋಗ.

1600-ಸತ್ಯಾನ್ವೇಶಣೆಯ ಹೊಸ ತತ್ವಗಳು, ಮತ್ತು ಪ್ರಾಯೋಗಿಕ ಪರಿಶೀಲನಾ ಪಧತಿಯ ಉಗಮ. ಪ್ರಯೋಗಗಳ ಆಧಾರದ ಮೇಲೆ ಸತ್ಯವನ್ನು ನಿರ್ಧರಿಸುವ ತೀರ್ಮಾನವಾಯಿತು.

ಕೊಪರ್ನಿಕಸನ ಸಿಧಾಂತ:

ಕೊಪರ್ನಿಕಸನು 1473 ರಲ್ಲಿ ಪೋಲ್ಯಾಂಡ್ ದೇಶದಲ್ಲಿ ಹುಟ್ಟಿದ. 1496 ರಲ್ಲಿ ಈತನು ಬೊಲೊಗ್ನಾ ವಿಶ್ವ ವಿದ್ಯಾಲಯಕ್ಕೆ ಸೇರಿದನು.

ಬಹಳ ಹಿಂದಿನ ಕಾಲದಿಂದಲೂ ಯುರೋಪಿಯನ್ನರು ಭೂಕೇಂದ್ರವಾದವನ್ನು ನಂಬಿದರು. ಆದರೆ ಖಗೋಳ ವೀಕ್ಷೆಣೆಯ ಕೆಲವು ಸಂಗತಿಗಳು ಈ ಸಿಧಾಂತಕ್ಕೆ ವಿರುದ್ಧವಾಗಿದ್ದವು. 1514-ಕೊಪರ್ನಿಕಸನು ಸೂರ್ಯನನ್ನು ಕೇಂದ್ರಬಿಂದುವಾಗಿಸಿ, ಬರಿಗಣ್ಣಿಗೆ ಕಾಣುವ ಎಲ್ಲ ಗ್ರಹಗಳು [ನಮ್ಮ ಭೂಮಿಯನ್ನು ಒಳಗೊಂಡು] ಸೂರ್ಯನನ್ನು ವಿವಿಧ ಕಕ್ಷೆಗಳಲ್ಲಿ ಸುತ್ತುತ್ತವೆ ಎಂದು ಸಾರಿದನು. ಜಗದ ಕೇಂದ್ರ ಭೂಮಿ ಅಲ್ಲ, ಬದಲಿಗೆ ಸೂರ್ಯ ಎಂದು ಕಂಡುಕೊಂಡನು. ಈ ತತ್ವವು ಅಂದಿನ ನಂಬಿಕೆಗೆ ವಿರುದ್ಧವಾಗಿ ಇರುವುದರಿಂದ, ಕೊಪರ್ನಿಕಸನು ಅದನ್ನು ಪ್ರಕಟಿಸಲಿಲ್ಲ. ಈ ತತ್ವವನ್ನು ತನ್ನ ಜೀವನದ ಕೊನೆಯ ಗಳಿಗೆಯಲ್ಲಿ ಪ್ರಕಟಿಸಲು ಅನುಮತಿ ನೀಡಿದನು. ಆತನ ಬದುಕಿನ ಕೊನೆಯ ದಿನಗಳಲ್ಲಿ,1543 ರಲ್ಲಿ ಆತನ ಕೃತಿಗಳು ಮುದ್ರಿತವಾದವು.

1600ರ ಹೊತ್ತಿಗೆ ಖಗೋಲಶಾಸ್ತ್ರ ತಿರುವು ಕಂಡಿತು. ಈ ಭೂಮಿಯು ಜಗತ್ತಿನ ಕೇಂದ್ರ ಅಲ್ಲ, ಬದಲಿಗೆ ಸೂರ್ಯನು ಈ ಜಗದ ಕೇಂದ್ರವಸ್ತು ಎಂಬುದು ಸತ್ಯಸಂಗತಿಯಾಗಿ ಹೊರಹೊಮ್ಮಿತು.

1600 ರ ತರುವಾಯ ಗೆಲೆಲಿಯೋ ಅವರ ಟೆಲೆಸ್ಕೋಪ್ ಅನ್ವೇಷೆಣೆ ಹಾಗು ಆಕಾಶಕಾಯಗಳ ವೀಕ್ಷಣೆ ಯಿಂದ, ಕೊಪರ್ನಿಕಸರ ಸಿದ್ಧಾಂತಕ್ಕೆ ಪೂರಕ ಬಲ ದೊರೆಯಿತು.

1600-ನಿಕೊಲಸ್ ಕೋಪರ್ನಿಕಸ್ ರ ಸೂರ್ಯಕೇಂದ್ರವಾದದಿಂದ ನವಚೇತನ ಆರಂಭಗೊಂಡಿತು. ಖಗೋಳಶಾಸ್ತ್ರಕ್ಕೆ ಗೆಲಿಲಿಯೋ ಹಾಗು ಕೆಪ್ಲರರ ಕೊಡುಗೆ ಅಪಾರ.

1609- ಕೆಪ್ಲರ್ ನ ಗ್ರಹಗಳ ಚೆಲನೆಯ ನಿಯಮಗಳ ನಿರೂಪಣೆ.

1610- ಗೆಲೆಲಿಯೋ ಗೆಲಿಲೀ ತಮ್ಮ ಟೆಲಿಸ್ಕೋಪ್ ಬಳಸಿ, ಗುರುಗ್ರಹದ ನಾಲ್ಕು ಉಪಗ್ರಹಗಳನ್ನುಶೋಧಿಸಿದರು. They were called Galilean satellites.

1610- ಗೆಲೆಲಿಯೋ ಗೆಲಿಲೀ ಶುಕ್ರಗ್ರಹದ ಕಲೆಗಳನ್ನು [ಚಂದ್ರನ ಕಲೆಗಳಂತಿರುವ] ಪತ್ತೆಹಚ್ಚಿದರು.

1617-ಗೆಲೆಲಿಯೋ ಗೆಲಿಲೀ ಮೋಡದಂತೆ ಕಾಣುವ ಆಕಾಶ ಗಂಗೆಯು, ಒತ್ತೊತ್ತಾದ ನಕ್ಷತ್ರಗಳಪುಂಜವೆಂದು ತೋರಿಸಿದರು.

1633- ಗೆಲೆಲಿಯೋ ಗೆಲಿಲೀ ಭೂಮಿಯು ಸೂರ್ಯನನ್ನು ಸುತ್ತುತ್ತದೆ, ಎಂದು ಬರೆದುದಕ್ಕೆ,ಇದು ಬೈಬಲ್ ಧರ್ಮ ಗ್ರಂಥದ ವಿರೋಧಿ ಎಂದು, ಆತನನ್ನು ಗ್ರಹಬಂಧನಕ್ಕೆ ಒಳಪಡಿಸಿದರು. His writings were in support of Copernican heliocentric system of universe.

1642- ಇಂಗ್ಲೆಂಡಿನ ಅರಸ ಚಾರ್ಲ್ಸ್ I ಮತ್ತು ಪಾರ್ಲಿಮೆಂಟ್ ಗಳ ಮಧ್ಯ ಮತಭೇದದಿಂದ ಸಾಮಾಜಿಕ ಕ್ರಾಂತಿಯ ಆರಂಭ. English civil war started.

1649- ಇಂಗ್ಲೆಂಡ್ ನಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿತು. ಚಾರ್ಲ್ಸ್ ಅರಸನನ್ನು ಗಲ್ಲಿಗೇರಿಸಲಾಯಿತು.

1654-The Black Death strikes eastern Europe.

1662- ಲಂಡನನಲ್ಲಿ ರಾಯಲ್ ಸೊಸೈಟಿಯ ಸ್ಥಾಪನೆಯಾಯಿತು.

1666- ತದನಂತರ ಪ್ಯಾರಿಷ್ ನಲ್ಲಿ ಫ್ರೆಂಚ್ ವಿಜ್ಞಾನ ಅಕಾಡಮಿಯ ಸ್ಥಾಪನೆ.

1661-ರಾಬರ್ಟ ಬಾಯ್ಲರವರ ವಾಯು ವತ್ತಡದ ನಿಯಮಗಳ ಶೋಧ. ಧಾತುವಿನ ಪರಿಕಲ್ಪನೆ. [The Skeptical Chemist in 1661]

ಐಸಾಕ್ ನ್ಯೂಟನ್ :

1642- ನ್ಯೂಟನ್ ಡಿಸೇಂಬೆರ್ 25ರಂದು ಪೂರ್ವ ಇಂಗ್ಲೆಂಡಿನ ರೈತರ ಮನೆಯಲ್ಲಿ ಜನಿಸಿದನು. ಅವನು ಹುಟ್ಟುವುದಕ್ಕೆ ಮುನ್ನವೇ ತಂದೆ ಇಲ್ಲದಾದನು. ಅವನು ಮಗುವಿರುವಾಗಲೇ ತಾಯೀ ಇನ್ನೊಬ್ಬನನ್ನು ಮದುವೆಯಾದಳು. ಚಿಕ್ಕವನಿರುವಾಗ ಅಜ್ಜಿಯ ಮನೆಯಲ್ಲಿ ಬೆಳೆದನು. ಹೆಚ್ಚಿನ ಸಮಯವನ್ನು ಏಕಾಂತವಾಗಿ ಕಳೆದನು.

1665-ನ್ಯೂಟನನು ಕ್ಯಾಂಬ್ರಿಜ್ ವಿಶ್ವವಿದ್ಯಾಲಯದಿಂದ ಪದವಿ ಪಡೆದನು. ಲಂಡನಿನಲ್ಲಿಯ ಪ್ಲೇಗ್ ಹಾವಳಿಯಿಂದಾಗಿ ತನ್ನ ಹಳ್ಳಿಯ ಹೊಲಕ್ಕೆ ಹೋದನು. ಅಲ್ಲಿರುವಾಗ ಕ್ಯಾಲ್ಕುಲಸ್ ಎನ್ನುವ ಗಣಿತ ಶ್ಯಾಸ್ತ್ರ ಕಂಡುಹಿಡಿದನು. ಸೂರ್ಯನ ಬೆಳಕಿನ ವಿಭಜನೆಯಿಂದ ಕಾಮನ ಬಿಲ್ಲಿನಂತಹ, ಬಣ್ಣಬಣ್ಣದ ಕಿರಣಗಳನ್ನು ಕಂಡನು. 1669ರಲ್ಲಿ ಅವನು ಗಣಿತ ಪ್ರಾಧ್ಯಾಪಕನಾಗಿ ಕ್ಯಾಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಮರಳಿದನು. 1672ರಲ್ಲಿ ಅವನು ರಾಯಲ್ ಸೊಸೈಟಿಯ ಸದಸ್ಯನಾದನು. ಅಲ್ಲಿ ತನ್ನ ಬೆಳಕಿನ ಸಂಶೋಧನೆಯ ಪ್ರಯೋಗಗಳನ್ನು ಪ್ರದರ್ಶಿಸಿದನು.

1684-ರಾಯಲ್ ಸೊಸೈಟಿಯ ಅಧ್ಯಕ್ಷನಾದ ಎಡ್ಮನ್ಡ್ ಹ್ಯಾಲಿ ನ್ಯೂಟನ್ನನ್ನು ಕ್ಯಾಂಬ್ರಿಜ್ ನಲ್ಲಿ ಭೆಟ್ಟಿ ಮಾಡಿದನು. ನ್ಯೂಟನನ ಕೃತಿ ಬಿಡುಗಡೆಗೆ ಧನಸಹಾಯ ಮಾಡಿದನು. 

1687- ಐಸಾಕ್ ನ್ಯೂಟನರ ಪ್ರಿನ್ಸಿಪಿಯಾ ಮೆಥೆಮ್ಯಾಟಿಕಾ ಪುಸ್ತಕ ಪ್ರಕಟವಾಯಿತು.[Principia Mathematica]

ನ್ಯೂಟನ್ ರಚಿತ ವಿಶ್ವ ಗುರುತ್ವ ನಿಯಮ :

M ಮತ್ತು m ರಾಶಿಗಳಿರುವ ಎರಡು ಕಾಯಗಳ ನಡುವಿನ ಅಂತರ r ಆಗಿದ್ದರೆ, ಇವುಗಳ ನಡುವೆ ವರ್ತಿಸುವ ಗುರುತ್ವಾಕರ್ಷಣೆ ಬಲ F = GMm/r2

ಭೂಮಿಯು ಸೂರ್ಯನ ಸುತ್ತ ಪರಿಭ್ರಮಿಸುವುದು ಮತ್ತು ಚಂದ್ರನು ಭೂಮಿಯನ್ನು ಪರಿಭ್ರಮಿಸುವುದು ಈ ನಿಯಮಕ್ಕೆ ಒಳಪಟ್ಟಿದೆ.

1688- ಪ್ರಜಾಪ್ರಭುತ್ವಗಳ ಸ್ಥಾಪನೆ ಮತ್ತು ಸಾಮಾಜಿಕ ನ್ಯಾಯ, ಪ್ರಜಾಹಿತ ಕೆಲಸಗಳು.

1689-The English parliament passes the Bill of Rights.

1700- ಜರ್ಮನಿಯಲ್ಲಿ ಬರ್ಲಿನ್ ವಿಜ್ಞಾನ ಅಕಾಡಮಿ ಸ್ಥಾಪನೆಯಾಯಿತು.

1705- ಖಗೋಳ ವಿಜ್ಞಾನಿ- ಎಡಮಂಡ್ ಹ್ಯಾಲಿಯು, 1337 ರಿಂದ 1698 ರ ವರೆಗೆ ಕಾಣಿಸಿಕೊಂಡ, 24 ಧೂಮಕೇತುಗಳ ಆಳವಾದ ಅಧ್ಯಯನ ಗೈದು; 1531, 1607 ಮತ್ತು 1682 ಗಳಲ್ಲಿ ಕಾಣಿಸಿಕೊಂಡಧೂಮಕೇತು ಒಂದೆ ಎಂದೂ, ಮತ್ತು ಅದು ಪುನಃ 1758ರಲ್ಲಿ ಕಾಣುವುದೆಂದು ಮುನ್ನುಡಿದನು. ಅವನು 1742 ರಲ್ಲಿ ಮರಣ ಹೊಂದಿದನು; ಧೂಮಕೇತುವು 1758 ರ ಕೊನೆಯಲ್ಲಿ ಪ್ರಕಟಗೊಂಡಿತು. ಹರ್ಶಗೊಂಡ ವಿಜ್ಞಾನಿಗಳು, ಅದನ್ನು ಹ್ಯಾಲಿ ಧುಮಕೇತು ಎಂದು ಕರೆದರು.ಧೂಮಕೇತುಗಳು ಗ್ರಹಗಳಂತೆ ಸೂರ್ಯನನ್ನು ಸುತ್ತುತ್ತವೆ ಎಂದು ಖಚಿತವಾಯಿತು.

1736-ಭೂಮಿಯ ಆಕಾರ ತಿಳಿಯಲು ವಿಜ್ಞಾನಿಗಳಿಂದ ಧ್ರುವಗಳತ್ತ ಪ್ರಯಾಣ ಮತ್ತು ಅಂಕಿ ಆಂಶಗಳ ಸಂಗ್ರಹಣೆ. ಭೂಮಿ ಪರಿಪೂರ್ಣ ದುಂಡಾಗಿ ಇಲ್ಲ, ಬದಲಿಗೆ ಧ್ರುವಗಳತ್ತ ಸ್ವಲ್ಪ ಚಪ್ಪಟೆ ಇದೆ ಎಂದು ಖಾತ್ರಿಯಾಯಿತು.

1746- ಔದ್ಯೋಗಿಕವಾಗಿ ದೊಡ್ಡ ಪ್ರಮಾಣದಲ್ಲಿ ಗಂಧಕಾಮ್ಲದ ತಯ್ಯಾರಿಕೆ [Lead Chamber process].

1760-ಯುರೋಪ ಖಂಡದಲ್ಲಿ ಔದ್ಯೋಗಿಕ ಕ್ರಾಂತಿಯ ಆರಂಭ.1769-ಪ್ರಥಮ ಬಾರಿಗೆ ಬಟ್ಟೆ ತಯ್ಯಾರಿಕೆಯಲ್ಲಿ ಉಗಿ ಯಂತ್ರದ ಬಳಕೆ.

1754-ಜೋಸೆಪ್ ಬ್ಲ್ಯಾಕ್ ರಿಂದ ಸುಣ್ಣದ ಕಲ್ಲಿನ ಪ್ರಯೋಗಗಳು. ಇಂಗಾಲದ ಡೈ ಆಕ್ಸಾಯಿಡ ಅನಿಲ ತಯ್ಯಾರಿಕೆ. [he called it as fixed air]

1762-1764 ರಲ್ಲಿ ಜೋಸೆಫ್ ಬ್ಲ್ಯಾಕ್ ಗುಪ್ತೋಷ್ಣದ ಅಧ್ಯಾಯನ ಗೈದರು. ಉಷ್ಣವು ಒಂದು ಪ್ರವಹನ ಶಕ್ತಿ ಎಂದು ಕಂಡುಕೊಂಡರು. ಉಪಕರಣ ತಯ್ಯಾರಕ ಜೇಮ್ಸ ವ್ಯಾಟ್ ಈ ತತ್ವ ಬಳಸಿ ಉಗಿ ಯಂತ್ರಕ್ಕೆ ಹೊಸದಾಗಿ ಒಂದು ಶೀತಲ-ಪೆಟ್ಟಿಗೆಯನ್ನು ಜೋಡಿಸಿದರು. ಈ ಸುಧಾರಣೆಯಿಂದ ಉಗಿಯಂತ್ರದ ಕಾರ್ಯ ಕ್ಷಮತೆಯಲ್ಲಿ ಹೆಚ್ಚಳ ಸಾಧ್ಯವಾಯಿತು.

1766- ಹೆನ್ರಿ ಕೆವೆಂದಿಶ್ ರಿಂದ ಜಲಜನಕ ಅನಿಲದ ಅನ್ವೇಷಣೆ.

1784 ರಲ್ಲಿ ಹೆನ್ರಿ ಕೆವೆಂದಿಶ್ ಜಲಜನಕವು ಗಾಳಿಯಲ್ಲಿಉರಿದು ನೀರು ಉಂಟಾಗುವುದನ್ನು ಅವಿಸ್ಕರಿಸಿದರು.

1774-ಜೋಸೆಫ್ ಪ್ರೀಸ್ಟ್ಲೆ ಯವರು ಪಾದರಸದ ಅಕ್ಸಯಿಡ್ ಅದಿರನ್ನು ಪೀನದರ್ಪಣದಿಂದ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಿ ಕಾಯಿಸಿ, ಆಮ್ಲಜನಕ ಅನಿಲ ಕಂಡುಹಿಡಿದರು. ಅವರು ಪ್ಯಾರಿಸ್ ನಗರಕ್ಕೆ ಭೆಟ್ಟಿ ಕೊಟ್ಟಾಗ ಅಲ್ಲಿನ ವಿಜ್ಞಾನಿಗಳಿಗೆ ತಮ್ಮ ಪ್ರಯೋಗದ ಬಗ್ಗೆ ವಿವರಿಸಿದರು.

1779-ಲಾವೋಸಿಯರ್ ರಿಂದ ಉರಿಯುವ ಪರಿಕಲ್ಪನೆಯ ವಿವರಣೆಗಳು. ದಹನ ಕ್ರಿಯಯಲ್ಲಿ ಆಮ್ಲಜನಕ ಅನಿಲದ ಪಾತ್ರದ ಸತ್ಯ ವಿವರಣೆ; ಲಾವೋಸಿಯರರ ರಾಸಾಯನಿಕ ಶಾಸ್ತ್ರದ ತಳಹದಿಗೆ ಕಾರಣ ವಾಯಿತು. ಧಾತುಗಳನ್ನು ಹೆಸರಿಸುವಲ್ಲಿ ಮತ್ತು ಹೊಸ ಹೊಸ ಶಬ್ದಗಳ ಉಪಯೋಗವು ರಸಾಯನ ಶಾಸ್ತ್ರಕ್ಕೆ ಹೊಸ ಭಾಸೆ ಕೊಟ್ಟಿತು. ಲಾವೋಷಿಯೆರರು ಮೊದಲ ಬಾರಿಗೆ, ಅಂದು ತಿಳಿದಿರುವ ಎಲ್ಲಾ ಧಾತುಗಳ ಪಟ್ಟಿ ಮಾಡಿದರು.

ಅವರು ರಾಸಾಯನಿಕ ಬದಲಾವಣೆಯಲ್ಲಿ ವಸ್ತುವಿನ ರಾಶಿ ಸ್ಥಿರವಾಗಿರುತ್ತದೆ ಎಂದು ತೋರಿಸಿದರು.ರಾಸಾಯನಿಕ ಬದಲಾವಣೆಯಲ್ಲಿ ಪಾಲ್ಗೊಳ್ಳುವ ವಸ್ತುಗಳ ರಾಶಿಯು, ಉತ್ಪನ್ನವಾದ ವಸ್ತುಗಳ ರಾಶಿಗೆ ಸಮವಾಗಿ ಇರುತ್ತದೆಂದು ತೋರಿಸಿದರು. ವಸ್ತುಯು ನಾಶವಾಗದು ಅಥವಾ ಹೊಸದಾಗಿ ಹುಟ್ಟದು ಎಂದು ತೋರಿಸಿದರು.

ಆಧುನಿಕ ರಸಾಯನ ಶಾಸ್ತ್ರಕ್ಕೆ ಮೂಲಪುರುಷರಾದರು.

1780- ವಿಲಿಯಂ ಹರ್ಷೇಲ್ಲರು ಖಗೋಳ ವೀಕ್ಸ್ಹೆಣೆ ಗೈದು , ನ್ಯೂಟನ್ ರ ನಿಯಮಗಳ ಅನ್ವಯ ಎಲ್ಲೆಲ್ಲೂ ಸರಿ ಎಂದರು. ಈ ನಿಯಮಗಳು ಇಡೀ ವಿಶ್ವಕ್ಕೆ ಅನ್ವಯ ಎಂದು ಉದ್ಗರಿಸಿದರು.William Herschel exclaimed that Newtons laws were indeed universal !

ಅಗಾಧವಾದ [ನಕ್ಷೆತ್ರಪುಂಜದಲ್ಲಿ] ಆಕಾಶ ಗಂಗೆಯಲ್ಲಿ, ನಕ್ಷತ್ರವು ಒಂದು ತುಣುಕು. ನಕ್ಷತ್ರದ ಮಹಾ ವ್ಯಾಪ್ತಿಯಲ್ಲಿ ಭೂಮಿ ಒಂದು ತುಣುಕು. ಭೂಮಿಯ ಮಹಾವ್ಯಾಪ್ತಿಯಲ್ಲಿ ಮಾನವ ಒಂದು ತುಣುಕು. ಮಾನವನ ಮಹಾವ್ಯಾಪ್ತಿಯಲ್ಲಿ ಪರಮಾಣು ಒಂದು ತುಣುಕು.

1783- ಅಮೇರಿಕ ದೇಶವು ಬ್ರಿಟಿಷರಿಂದ ಸ್ವತಂತ್ರವಾಯಿತು.

1784-ಅದಿರಿನಿಂದ ಕಬ್ಬಿಣ ಬೆರ್ಪಡಿಸುವ ವಿಧಾನದಲ್ಲಿ ಸುಧಾರಣೆ.

1785-ಜೇಮ್ಸ ವ್ಯಾಟ್ ರಿಂದ ಉಗಿ ಯಂತ್ರದ ಸುಧಾರಣೆ ಮತ್ತು ಬಟ್ಟೆ ತಯ್ಯಾರಿಕೆಯ ಉದ್ಯೋಗದಲ್ಲಿ ಉಗಿ ಯಂತ್ರಗಳ ಯಾಂತ್ರಿಕ ಶಕ್ತಿಯ ಸಫಲ ಬಳಕೆ. ಉಗಿಯಂತ್ರಗಳು ಕಡಿಮೆ ವೆಚ್ಚದ ಯಾಂತ್ರಿಕ ಶಕ್ತಿಯ ಸಾಧನಗಳಾದವು. ಇದರಿಂದ ಯುರೋಪ ಖಂಡದಲ್ಲಿ ಔದ್ಯೋಗಿಕ ಕ್ರಾಂತಿ ಆರಂಭವಾಯಿತು.

1794- ಫ್ರೆಂಚ್ ಮಹಾ ಕ್ರಾಂತಿಯಲ್ಲಿ ಲಾವೊಲಿಸಿಯರ್ ವಿಜ್ಞಾನಿಯು ಕೊಲೆಯಾದನು.

1785-ಫ್ರೆಂಚ್ ಭೌತ ವಿಜ್ಞಾನಿ ಕೊಲಂಬಸ್ ರ ವಿದ್ಯುತ್ ಆವೇಶಗಳ ಆಕರ್ಷಣೆಯ ನಿಯಮ.

Coulomb's inverse-square law:-The magnitude of the electrostatic force of attraction or repulsion between two point charges is directly proportional to the product of the magnitudes of charges and inversely proportional to the square of the distance between them.

1800-ಇಟಲಿಯ ಭೌತಶಾಸ್ತ್ರ ಪ್ರಾಧ್ಯಾಪಕರಾದ ಅಲೆಸ್ಯಾಂಡ್ರೋ ವೋಲ್ಟಾ ರವರ ವಿದ್ಯುತ್ ಕೋಶದ ಆವಿಸ್ಕಾರ. Voltaic Pile

1808-ಡಾಲ್ಟನ್ ರ ಪರಮಾಣು ಸಿಧ್ಧಾಂತ ಮತ್ತು ಔದ್ಯೋಗಿಕ ರಸಾಯನ ಶಾಸ್ತ್ರದ ಬೆಳವಣಿಗೆ.ಎಲ್ಲಾ ವಸ್ತುಗಳು ಪರಮಾಣುಗಳೆಂಬ ಸೂಕ್ಷ್ಮ ಕಣಗಳಿಂದ ಆಗಿವೆ ಎಂದು ಡಾಲ್ಟನ್ ರವರು ಪ್ರತಿಪಾದಿಸಿದರು. ಪರಮಾಣುಗಳನ್ನು ಪರಮಾಣು ರಾಶಿಯಿಂದ ಗುರುತಿಸಲಾಗುತ್ತಿತ್ತು. ಭಿನ್ನ ಭಿನ್ನ ಜಾತಿಯ ಧಾತುಗಳ ಪರಮಾಣುಗಳು ಭಿನ್ನ ಭಿನ್ನ ರಾಶಿಯನ್ನು ಹೊಂದಿವೆ ಎಂದು ಪ್ರತಿಪಾದಿಸಿದರು.

1812-1824, ಯಾಂತ್ರಿಕ ಶಕ್ತಿ ಬಳಸಿ ಉಗಿ ಬಂಡಿಯ ನಿರ್ಮಾಣ ಮತ್ತು ಬ್ರಹತ ಪ್ರಮಾಣದಲ್ಲಿ ಸರಕು ಸಾಗಣೆ. [Stephenson was hired to build the 13-km Hetton colliery railway in 1820]. This line used a gauge of 4 ft 8 in (1,422 mm). The rails used for the line were wrought iron.

1828-ಸಮುದ್ರದ ಉಪ್ಪು ಬಳಸಿ ಸೋಡಾ ತಯ್ಯಾರಿಕೆ ಉದ್ಯೋಗ ಆರಂಭ ವಾಯಿತು. NaCl to Na2CO3. ಹೀಗೆ ರಾಸಾಯನ ಶಾಸ್ತ್ರದ ಬೆಳವಣಿಗೆ ಪ್ರಗತಿಯಲ್ಲಿ ಸಾಗಿತು.

1837- ತಂತಿಯಿಂದ ಮಾಹಿತಿ ಕಳುಹಿಸುವ ಸಾಧನದ ಆವಿಸ್ಕಾರ. Telegraph was invented.

1840-ರಾಸಾಯನಿಕ ವಿದ್ಯಾಲಯಗಳ ಸ್ಥಾಪನೆ.

ಮೈಕಲ್ ಫ್ಯಾರಡೆ

1-3-1813 ರಂದು, ಮೈಕಲ್ ಫ್ಯಾರಡೆಯವರು ತಮ್ಮ 21 ನೇ ವಯಸ್ಸಿನಲ್ಲಿ  ಇಂಗ್ಲೆಂಡಿನ ರಾಯಲ್ ಸಂಸ್ಥೆಯಲ್ಲಿ  ತಮ್ಮ ಕೆಲಸವನ್ನು ಆರಂಭಿಸಿದರು. ಮೈಕಲರು ರಾಯಲ್ ಸಂಸ್ಥೆಯಲ್ಲಿ ಕೆಲಸದಲ್ಲಿರುವಾಗ, ಕೇವಲ 7 ತಿಂಗಳುಗಳಲ್ಲಿ, ಹಂಫ್ರಿ ದೇವಿಯವರು ಫ್ಯಾರಡೆಯನ್ನು 18  ತಿಂಗಳುಗಳ ಯೂರೋಪಿನ ಪ್ರವಾಸಕ್ಕಾಗಿ ತಮ್ಮ ಸೆಕ್ರೆಟರಿ ಆಗಿ ಕರೆದುಕೊಂಡು ಹೋದರು. ಈ ಪ್ರವಾಸದಲ್ಲಿ ಫ್ಯಾರಡೆಯವರು ಫ್ರಾನ್ಸನಲ್ಲಿ ಅಂಪೇರ್ ಹಾಗು ಮಿಲನ್ ನಲ್ಲಿ ಅಲೆಸ್ಯಾಂಡ್ರೋ ವೋಲ್ಟಾ ರಂತಹ ಶ್ರೇಷ್ಟ ವಿಜ್ಞಾನಿಗಳನ್ನು ಕಂಡರು. ಈ ಪ್ರವಾಸ ಅವರಿಗೆ ವಿಶ್ವವಿದ್ಯಾಲಯದಲ್ಲಿಯ ಶಿಕ್ಚಣದಂತಹ ಅನುಭವ ನೀಡಿತು ಮತ್ತು ಇದರಿಂದ ಫ್ಯಾರಡೆಯವರು ಹೆಚ್ಚಿನ ವೈಜ್ಞಾನಿಕ ತರಬೇತಿ ಪಡೆದರು. 1821 ರಲ್ಲಿ, ತಮ್ಮ 29 ನೇ ವಯಸ್ಸಿಗೆ ಅವರು ರಾಯಲ್ ಸಂಸ್ಥೆಯ ಹಾಗೂ ಪ್ರಯೋಗಶಾಲೆಯ ಸೂಪರಿಂಟೆಂಡೆಂಟ್ ಆಗಿ ಬಡತಿ ಪಡೆದರು. ಇದು ಅವರು ತಮ್ಮದೇ ಆದ ರೀತಿಯಲ್ಲಿ ಒಬ್ಬ ಪ್ರಮುಖ ವಿಜ್ಞಾನಿಯಾಗಿ ಬೆಳೆದುದಕ್ಕೆ ಸಾಕ್ಷಿಯಾಗಿದೆ. 1825 ರಲ್ಲಿ ತಮ್ಮ 33 ನೇ ವಯಸ್ಸಿಗೆ, ಫ್ಯಾರಡೆಯವರು ರಾಯಲ್ ಸಂಸ್ಥೆಯ ಪ್ರಯೋಗಾಲಯದ ನಿರ್ದೇಶಕರಾಗಿ ನೇಮಕಗೊಂಡರು.

1856-ಕಬ್ಬಿಣ ಮತ್ತು ಉಕ್ಕು ಉತ್ಪಾದನಾ ಸಾಮರ್ಥ್ಯೆಯ ಹೆಚ್ಚಳ. [Henry Bessemer’s process could produce 5 tons of Iron in a heat of one hour].

1860- ಜರ್ಮನಿಯಲ್ಲಿ ಜಾಗತಿಕ ಮಟ್ಟದಲ್ಲಿ ಮೊಟ್ಟಮೊದಲ ರಾಸಾಯನಿಕ ವಿಜ್ಞಾನಿಗಳ ಕೂಟ. [The Karlsruhe Congress] Germany.

1869-ಸೈಬೇರಿಯಾದ ವಿಜ್ಞಾನಿ ಮೆಂಡೆಲೇವ್ ಅವರಿಂದ ಧಾತುಗಳ ಆವರ್ತಕ ಕೋಸ್ಟಕದ ಪರಿಕಲ್ಪನೆ. ಹೀಗೆ ಅಧುನಿಕ ವಿಜ್ಞಾನ ಅಸ್ತಿತ್ವಕ್ಕೆ ಬಂದಿತು.

1876- ಅಮೆರಿಕಾ ದೇಶದಲ್ಲಿ ದೂರವಾಣಿಯ ಬಳಕೆ ಆರಂಭ. telephone was invented.

1894-ವಿಲಿಯಮ್ ರಾಮಸೇ ಅವರಿಂದ ನಿಷ್ಕ್ರಿಯ ಅನಿಲಗಳ [Noble gases] ಶೋಧ .

1900 ರ ವರೆಗೆ  ವಿಜ್ಞಾನಿಗಳು ೮೮ ವಿವಿಧ ಪ್ರಕಾರದ  ಮೂಲವಸ್ತುಗಳ ಶೋಧ ಗೈದರು.

1900- ಎಲ್ಲಾ ಧಾತುಗಳ ಪರಮಾಣುಗಳು, ಇಲೆಕ್ಟ್ರಾನ್ ಎನ್ನುವ ಸೂಕ್ಷ್ಮ ಕಣಗಳನ್ನು ಹೊಂದಿವೆ ಎಂದು ಜೆ ಜೆ ಥಾಮ್ಸನ್ ವಿವರಿಸಿದರು. ಈ ಸೂಕ್ಷ್ಮ ಕಣಗಳು ಋಣ ವಿದ್ಯುತ್ ಆವೇಶ ಹೊಂದಿವೆ ಎನ್ನುವುದು ಖಚಿತವಾಯಿತು.

1900-ಭೌತ ವಿಜ್ಞಾನಿ ಪ್ಲ್ಯಾಂಕ್ ರಿಂದ ಶಕಲ ಸಿಧಾಂತದ ಉಗಮ ವಾಯಿತು. [Quantum theory of radiation].

1905 ರಲ್ಲಿ ಐನ್ಸ್ಟೀನ್ ಎಂಬ ಮಹಾನ್ ವಿಜ್ಞಾನಿಯು ಸಾಪೇಕ್ಷೆ ಸಿಧಾಂತ ಬಳಸಿ; ವಸ್ತು ಮತ್ತು ಶಕ್ತಿಯ ಸಂಬಂಧದ ಸೂತ್ರವನ್ನು ಪ್ರಕಟಿಸಿದರು. E = mC2 ವಸ್ತು ಮತ್ತು ಶಕ್ತಿ ಎರಡು ಒಂದೇ ಇದ್ದು , ವಸ್ತುವನ್ನು ಶಕ್ತಿಯಾಗಿ ರೂಪಾಂತರಿಸಬಹುದು ಎಂದರು.

ಮುಂದಿನ ಮೂರು ದಶಕಗಳಲ್ಲಿ ಪರಮಾಣುಗಳು ಇಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳೆಂಬ ಅತೀ ಸೂಕ್ಷ್ಮ ಕಣಗಳಿಂದ ಆಗಿವೆ ಎಂದು ಪ್ರಯೋಗಗಳಿಂದ ತಿಳಿದುಕೊಂಡರು.

1902- ರೈಟ್ ಸಹೋದರರಿಂದ ಅಮೆರಿಕಾ ದೇಶದಲ್ಲಿ ವಿಮಾನ ತಯ್ಯಾರಿಸಲಾಯಿತು.

1912- ಮಾನವ ದ್ವನಿಯ ರೇಡಿಯೋ ಪ್ರಸಾರ ಆರಂಭ.

1913- ಬೊಹರ್ ರ ಜಲಜನಕ ಪರಮಾಣುವಿನ ರಚನಾ ವಿನ್ಯಾಸ. ಪರಮಾಣುವಿನ ಸ್ಥಿರ ಶಕ್ತಿಯ ಕವಚಗಳ ಕಲ್ಪನೆ. ಇಲೆಕ್ಟ್ರಾನ್ ಗಳು ನಿರ್ದಿಷ್ಟ ಕವಚದಲ್ಲಿ ಮಾತ್ರ ಇರಬಹುದಾದ ಕಲ್ಪನೆ.

1928- ಶ್ರೋಡಿಂಗೆರ್ ವಿಜ್ಞಾನಿಯು ಪರಮಾಣು ರಚನೆಗೆ ಸಂಬಂಧಿಸಿದಂತೆ, ಶಕಲ ಸಿಧಾಂತದ ಮೂಲ ಸೂತ್ರವನ್ನು ಪ್ರಕಟಿಸಿದನು.

E𝟁 = H𝟁 , ಇದು ಎಲ್ಲಾ ಪರಮಾಣುಗಳ ರಚನೆ ಅರಿಯಲು ಪೂರಕವಾಯಿತು. ಪರಮಾಣುಗಳ s, p, d, ಮತ್ತು f, ಉಪಕವಚಗಳ ಪರಿಚಯವಾಯಿತು.

------------------------------------------------------------------------------------------------------

ತುಕಾರಾಮ ತಂದೆ ಗುಂಡಪ್ಪ :

ಶಿಕ್ಷಣ ಮತ್ತು ಹುದ್ದೆ: 

ಬಾಲ್ಯದಿಂದಲೇ ನಾನೊಬ್ಬ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದೆ. ಮೂರನೇ ತರಗತಿಯಿಂದಲೇ ವರ್ಗದಲ್ಲಿ ಮೊದಲಿಗನಾಗಿ ತೇರ್ಗಡೆಯಾಗುತ್ತಿದ್ದೆ. ಏಳನೇ ಬೋರ್ಡ್ ಪರೀಕ್ಷೆಯಲ್ಲಿ ಯಾವುದೇ ವಿಶೇಷ ತರಬೇತಿ ಇಲ್ಲದೆ, ಗಣಿತ ವಿಷಯದಲ್ಲಿ ೯೦% ಅಂಕ ಗಳಿಸಿದೆ. ಹಳ್ಳಿಯ ಸರಕಾರಿ ಶಾಲೆಯಲ್ಲಿ ಓದಿ, ೧೯೬೯ರ ಮೆಟ್ರಿಕ್ ಪರಿಕ್ಷೆಯಲ್ಲಿ ತರಗತಿಗೆ ಪ್ರಥಮ ವಿದ್ಯಾರ್ಥಿಯಾಗಿ, ೬೭% ಗುಣಗಳನ್ನು ಪಡೆದು, ಫಸ್ಟ್ ಕ್ಲಾಸ್ ನಲ್ಲಿ ಪಾಸಾದೆ.

ಪ್ರೌಢಶಾಲೆಯಲ್ಲಿ ಇರುವಾಗ ತಂದೆಯನ್ನು ಕಳೆದುಕೊಂಡೆ. ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ಸಮಷ್ಯ ಎದುರಾಯಿತು. ಹತ್ತನೇ ಪರಿಕ್ಷೆ ಬರೆದ ಕೂಡಲೇ ಅಮ್ಮ ನನಗೊಂದು ಸರಳ ಮದುವೆ ಮಾಡಿದರು.

ಮನೆಯಲ್ಲಿ ಒಂದು ಪೈ ಇಲ್ಲದಿದ್ದರೂ ಕಾಲೇಜಿಗೆ ಸೇರಿ ವಿದ್ಯಾಭ್ಯಾಸ ಮಾಡಬೇಕೆನ್ನುವ ನನ್ನ ಹಂಬಲಕ್ಕೆ ಧನ ಸಹಾಯ ಬೇಕಾಗಿತ್ತು. ಅದು ಸಿಗಲಿಲ್ಲ.

ಮದುವೆಯಲ್ಲಿ ಉಡುಗೊರೆಯಾಗಿ ಕೊಟ್ಟ ಬಂಗಾರದ ಉಂಗುರ ಮಾರಾಟಮಾಡಿ ಬೀದರಿನ ಭೂಮರಡ್ಡಿ ಕಾಲೇಜಿಗೆ ಪ್ರವೇಶ ಪಡೆದೆ. ನನ್ನ ಹೆಂಡತಿಯ ಅಣ್ಣ ಗುಂಡಪ್ಪಅವರು, ಬಿ. ಎ. ಅಂತಿಮ ವರುಷದ ವಿದ್ಯಾರ್ಥಿಯಾಗಿದ್ದು, ಅವರು ಬೀದರಿನಲ್ಲಿಯೇ  ಬಾಡಿಗೆ-ಮನೆ ಮಾಡಿಕೊಂಡು ಇದ್ದರು. ಕಾಲೇಜಿನ ಮೊದಲ ವರುಷ, ಅವರೊಂದಿಗೆ ಇರಲು ಅನುಕೂಲವಾಯಿತು. 1970 ಆರ್ಥಿಕ ಅಭಾವವಿದ್ದರೂ, ಒಂದು-ವರುಷದ ಪಿ,ಯು,ಸಿ, ಸೈನ್ಸ್ ಕೋರ್ಸ್ ನಲ್ಲಿ, ೫೮% ಗುಣಗಳೊಂದಿಗೆ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದೆ.

1970 ವರುಷದ ಅಂತ್ಯದಲ್ಲಿ ನನಗೆ ಬಡ ವಿದ್ಯಾರ್ಥಿ ಎಂದು, ಫ್ರೀಶಿಪ್ ಎನ್ನುವ ವಿದ್ಯಾರ್ಥಿ ವೇತನ ಕೊಟ್ಟರು. ಅಂದರೆ ಕಾಲೇಜಿಗೆ ಕಟ್ಟಿದ ೩೦೦ ರೂಪಾಯಿ ಹಿಂತಿರುಗಿ ಬಂತು. ಈ ಹಣವನ್ನು ಮರು-ವರುಷದ ಬಿ,ಎಸ,ಸಿ ಪಾರ್ಟ್-೧ ಗೆ ಪ್ರವೇಶ ಪಡೆಯಲು ಉಪಯೋಗಿಸಿದೆ.

ಬಡ ವಿದ್ಯಾರ್ಥಿ ಎಂದು ರಾಷ್ಟ್ರೀಯ ಸಾಲದ ರೂಪದಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದೆ. ಇದರಿಂದ ನಾನು ಮೆರಿಟ್ ಆಧಾರದ ಮೇರೆಗೆ ನ್ಯಾಶನಲ್ ಲೋನ್ ಸ್ಕಾಲರ್ಶಿಪ್ ಗೆ ಆಯ್ಕೆಯಾದೆ. ಪೂರ್ಣ ಮೂರೂ ವರುಷಗಳ ವಿಜ್ಞಾನ ಪದವಿಗೆ ಓದಲು ಸರಕಾರದಿಂದ ವರುಷಕ್ಕೆ ೭೨೦ ರೂಪಾಯಿಯಂತೆ @ ೪% ಸರಳ ಬಡ್ಡಿಯ ಸಾಲ ಸಿಗುತ್ತಿತ್ತು. ಈ ಹಣದಲ್ಲಿ ಒಂದು ವರುಷದ ಕಲಿಕೆಯ ಎಲ್ಲ ಖರ್ಚು ನಡೆಯುತ್ತಿತ್ತು.

ಆದರೆ ಪದವಿಯ ಅಧ್ಯಯನದ ಕೊನೆಯ ವರುಷವಾದ ೧೯೭೨ರ ಸಾಲದ ಕಂತು ಬರಲಿಲ್ಲ. ಅದೇ ಕಾಲಕ್ಕೆ ಬೀದರ ಜಿಲ್ಲೆಯಲ್ಲಿ ಭೀಕರವಾದ ಬರಗಾಲ ಬೇರೆ ಇತ್ತು. ಕಾಲೇಜಿಗೆ ೨೦೦ ರೂಪಾಯಿ ಟಿವಿಶನ್ ಫೀ ಕಟ್ಟುವುದು ಇನ್ನೂ ಬಾಕಿ ಇತ್ತು. ಆದ್ದರಿಂದ ವಿಧಿಯಿಲ್ಲದೇ ನನ್ನ ಹೆಂಡತಿಯ ಅಣ್ಣನಾದ ವೀರಪ್ಪ ಅವರಿಗೆ, ಈ ಸಮಸ್ಯ ವಿವರಿಸಿದೆ. ಅವರು ತಮ್ಮ ಸೋದರಮಾವನಾದ, ಮುಕುಂದ ಸುಲ್ತಾನಪುರ್ ಎನ್ನುವವರಿಂದ ೨೦೦ ರೂಪಾಯಿ ಹಣ ಕೊಡಿಸಿದರು. ಕಾಲೇಜಿನ ಫೀ ಕಟ್ಟಿದೆ.

ಇನ್ನು ನಿತ್ಯದ ಖರ್ಚಿಗಾಗಿ ಹಣ ಇರಲಿಲ್ಲ. ಅಷ್ಟರಲ್ಲಿ ನನ್ನ ಅಜ್ಜಿ ನರಸಮ್ಮ ನನ್ನನ್ನು ಕಾಣಲು ಬೀದರಕ್ಕೆ ಬಂದು, ನನ್ನ ಆರ್ಥಿಕ ಸಮಸ್ಯೆ ನೋಡಿ, ತಮ್ಮ ಬಂಗಾರದ ಮೂಗುತಿಯನ್ನೇ ತೆಗೆದು ಕೊಟ್ಟರು. ಅದನ್ನು ಮಾರಾಟ ಮಾಡಿ, ೧೯೭೩ರ ಏಪ್ರಿಲ್ ತಿಂಗಳಲ್ಲಿ ಪದವಿಯ ಅಂತಿಮ ಪರೀಕ್ಷೆ ಬರೆಯುವ ವರೆಗೆ, ಬೀದರ ನಗರದಲ್ಲಿ ಜೀವನ ಸಾಗಿಸಿದೆ. ೧೯೭೩ರಲ್ಲಿ ೫೬% ಗುಣಗಳೊಂದಿಗೆ, ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಗಳಿಸಿದೆ. ಪದವಿಗಾಗಿ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳನ್ನು ಆರಿಸಿಕೊಂಡಿದ್ದೆ.

Comments

Popular posts from this blog